Grabline.com - News from India, USA and World. Deals and comparison shopping to save you money.
Sat, 05 Jul 2008 11:10 am PDT
 

News and Deals - Grab it all here

Some go everywhere, some grab it all here

 News | Hindi | Shopping | Deals | Find Lowest Price Save! | Credit Cards Compare!

"To catch a husband is an art; to hold him is a job." - Simone de Beauvoir
 
Spread Grabline.com
 
 OneIndia - Kannada 
Sat, 05 Jul 2008 16:03:07 GMT
•  ಪತ್ರಕರ್ತೆ ಸುಮನಾ ಕಿತ್ತೂರರ 'ಸ್ಲಂ ಬಾಲ' ಸಿದ್ಧ 
ವಿಶೇಷ ಅಂಕಣಗಳನ್ನು ಬರೆದು ಓದುಗರಿಗೆ ಅಚ್ಚುಮೆಚ್ಚಾಗಿದ್ದ ಪತ್ರಕರ್ತೆ ಸುಮನ ಕಿತ್ತೂರ ನಿರ್ದೇಶನದ ಪ್ರಥಮ ಚಿತ್ರ 'ಸ್ಲಂಬಾಲ'. ಚಿತ್ರಕ್ಕೆ ನಿಗದಿತ ಯೋಜನೆಯಂತೆ ಚಿತ್ರೀಕರಣ ಪೂರ್ಣವಾಗಿದ್ದು ಆಕಾಶ್ ಸ್ಟೂಡಿಯೊದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಈ ಹಿಂದೆ 'ಆ ದಿನಗಳು' ಚಿತ್ರವನ್ನು ನಿರ್ಮಿಸಿದ್ದ, ಪ್ರಸ್ತುತ ಚಿತ್ರದ ನಿರ್ಮಾಪಕರಾದ ರವೀಂದ್ರ ಹಾಗೂ ಸೈಯ್ಯದ್ ಅಮಾನ್ ತಿಳಿಸಿದ್ದಾರೆ.
 
•  ಬುಷ್ ಗಿಂತ ಆಡ್ವಾಣಿ ಅಪಾಯಕಾರಿ: ಅಮರ್ ಸಿಂಗ್ 
ನವದೆಹಲಿ, ಜು. 5 : ಭಾರತೀಯ ಜನತಾ ಪಕ್ಷ ಅಮೇರಿಕದ ಅಧ್ಯಕ್ಷ ಜಾರ್ಜ್ ಬುಷ್ ಗಿಂತ ಅಪಾಯಕಾರಿ ಎಂದು ಸಮಾಜವಾದಿ ಪಕ್ಷದ ಮುಖಂಡ ಅಮರಸಿಂಗ್ ಆರೋಪಿಸಿದ್ದಾರೆ. ಯಾವುದೇ ಕಾರಣಕ್ಕೂ ಜಾತೀಯತೆ ಪಕ್ಷಗಳು ಅಧಿಕಾರಕ್ಕೆ ಬರುವುದನ್ನು ಸಮಾಜವಾದಿ ಪಕ್ಷ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
 
•  ಮಾಣೆಕ್ ಷಾಗೆ ಬೆಂಗಳೂರಿನಲ್ಲಿ ಸೇನೆಯ ಅಶ್ರುತರ್ಪಣ 
ಬೆಂಗಳೂರು, ಜು. 5 : ಜೂನ್ 26ರಂದು ಕಾಲಗರ್ಭ ಸೇರಿದ ಅಪ್ರತಿಮ ಸೇನಾನಿ, ಸ್ಫೂರ್ತಿದಾಯಕ ನಾಯಕ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಷಾ ಅವರಿಗೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಶನಿವಾರ ಆರ್ಮಿ ಸರ್ವೀಸ್ ಸೆಂಟರ್ ಕೋರ್ ಮತ್ತು ಕಾಲೇಜ್‌ನಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು. ಇದೇ ಸಮಯದಲ್ಲಿ, ಸೇನಾ ಸಿಬ್ಬಂದಿಗಳು ಕೂಡ ಅಗಲಿದ ಫೀಲ್ಡ್ ಮಾರ್ಷಲ್‌ಗೆ ಅಂತಿಮ ನಮನ ಸಲ್ಲಿಸಿದರು. ನ್ಯುಮೋನಿಯಾದಿಂದ ಬಳಲುತ್ತಿದ್ದ 94ರ ಹರೆಯದಲ್ಲಿದ್ದ ಮಾಣೆಕ್ ಷಾ ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿ ಜೂನ್ ...
 
•  ನಧೀಂ ಧೀಂ ತನ ಹುಡುಗಿ ಭಾವನಾ ರಾವ್ ಎಲ್ಲಿ? 
ಭಾವನಾ ರಾವ್ ಗೊತ್ತಲ್ಲ, ಅದೇ ಕಂಡ್ರೀ, ಖ್ಯಾತ ನಿರ್ದೇಶಕ ಯೋಗರಾಜಭಟ್ ನಿರ್ದೇಶನದ 'ಗಾಳಿಪಟ' ಚಿತ್ರದಲ್ಲಿ ಗಾಯಕ ಹಾಗೂ ನಟ ರಾಜೇಶ್ ಕೃಷ್ಣನ್ ಜತೆ ''ನಧೀಂ ಧೀಂ ತನ...'' ಎನ್ನುವ ಪ್ರಸಿದ್ಧ ಹಾಡಿಗೆ ಕುಣಿದ ಚೆಲುವೆ. ಆಕೆ ಇದೀಗ ಮತ್ತೆ ಎರಡು ಚಿತ್ರದಲ್ಲಿ ನಟಿಸುತ್ತಿದ್ದಾಳೆ.
 
•  ಮರಳುಗಾಡಲ್ಲಿ ಮಲ್ಲಿಗೆಯಂತಿರುವ ಕುವೈಟ್ ಕನ್ನಡಕೂಟ 
ಕನ್ನಡಿಗರೇ ವಿರಳವಾಗಿರುವ ಕುವೈಟ್‌ನಂಥ ರಾಷ್ಟ್ರಗಳಲ್ಲಿ ಕನ್ನಡದೆರಡು ನುಡಿಗಳು ಕಿವಿಗೆ ಬಿದ್ದರೂ ಮರಳುಗಾಡಿನಲ್ಲಿ ಸಿಕ್ಕ ಓಯಾಸಿಸ್‌ನಂತೆ. ನಮ್ಮ ನೆಲದಿಂದ ದೂರ ದೇಶದಲ್ಲಿದ್ದು ಅಲ್ಲಿನ ಕನ್ನಡದ ಮಲ್ಲಿಗೆಯ ಕಂಪನ್ನು ಹೀರಿ, ಅಲ್ಲಿನ ಕನ್ನಡಿಗರ ಆಚಾರ, ವಿಚಾರ, ವಾತಾವರಣದ ಬಗ್ಗೆ ಸುಗುಣ ಮಹೇಶ್ ಪರಿಚಯ ಮಾಡಿಕೊಟ್ಟಿದ್ದಾರೆ.
 
•  ಕುಮಾರಸ್ವಾಮಿಗೆ ಗಣಿ ಧಣಿ ಜನಾರ್ದನ ರೆಡ್ಡಿ ಸವಾಲು 
ಬೆಂಗಳೂರು, ಜು. 5 : ತಮ್ಮ ಅಧಿಕಾರ ಅವಧಿಯಲ್ಲಿ ಗಣಿ ಲಂಚ ಪ್ರಕರಣವನ್ನು ಸಿಬಿಐ ತನಿಖೆಗೆ ಯಾಕೆ ವಹಿಸಲಿಲ್ಲ ಎನ್ನುವುದನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೊದಲು ಸ್ಪಷ್ಟಪಡಿಸಲಿ ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಸವಾಲು ಹಾಕಿದ್ದಾರೆ.
 
•  ಪ್ರಧಾನಿ ವಿಶ್ವಾಸಮತ ಯಾಚಿಸಲು ಆಡ್ವಾಣಿ ಆಗ್ರಹ 
ನವದೆಹಲಿ, ಜು. 5 : ಅಭದ್ರತೆಯ ಸುಳಿಯಲ್ಲಿ ಸಿಲುಕಿರುವ ಕೇಂದ್ರ ಯುಪಿಎ ಸರ್ಕಾರ ವಿಶ್ವಾಸಮತ ಕಳೆದುಕೊಂಡಿದೆ. ಆದ್ದರಿಂದ ಕೂಡಲೇ ತುರ್ತು ಅಧಿವೇಶನ ಕರೆದು ವಿಶ್ವಾಸಮತ ಯಾಚಿಸಬೇಕು ಎಂದು ಬಿಜೆಪಿ ಮುಖಂಡ, ಹಾಗೂ ವಿರೋಧ ಪಕ್ಷದ ನಾಯಕ ಎಲ್.ಕೆ.ಆಡ್ವಾಣಿ ಆಗ್ರಹಿಸಿದ್ದಾರೆ.
 
•  ಮಹಾನ್ ದಾರ್ಶನಿಕ ಗುರುದೇವ ರಾನಡೆ : ಭಾಗ 2 
ಮಹಾನ್ ದಾರ್ಶನಿಕ ಡಾ. ಗುರುದೇವ ರಾನಡೆ ಮತ್ತು ವರಕವಿ ದತ್ತಾತ್ರೆಯ ರಾಮಚಂದ್ರ ಬೇಂದ್ರೆ ಇವರಿಬ್ಬರು ಮಹಾನುಭಾವರು ನನ್ನನ್ನು ಹಿಡಿದು ‘ಇವ ನಮ್ಮ ಹುಡುಗ" ಅಂದಾಗ ನನ್ನ ಜೀವನ ಧನ್ಯವಾಯಿತು ಎಂದೆನಿಸಿತ್ತು.
 
•  ಗುಲ್ಬರ್ಗದಲ್ಲಿ ನ್ಯಾಯ ದೇಗುಲ ಬಾಗಿಲು ತೆರೆಯಿತು 
ಗುಲ್ಬರ್ಗ, ಜು. 5 : ಹೈದರಾಬಾದ್ ಕರ್ನಾಟಕ ಪ್ರದೇಶದ ಜನರ ಮಹತ್ವಕಾಂಕ್ಷೆಯ ಸಂಚಾರಿ ಹೈಕೋರ್ಟ್ ಪೀಠವನ್ನು ಸುಪ್ರಿಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಾ.ಕೆ.ಜಿ.ಬಾಲಕೃಷ್ಣನ್ ಶನಿವಾರ ವಿದ್ಯುಕ್ತವಾಗಿ ಉದ್ಘಾಟನೆ ಮಾಡಿದರು. ಜು. 7 ರಿಂದ ಅಧಿಕೃತವಾಗಿ ಸಂಚಾರಿ ಹೈಕೋರ್ಟ್ ಪೀಠ ಕಾರ್ಯಾರಂಭ ಮಾಡಲಿದೆ. ಬಹುದಿನದ ಕನಸು ನನಸಾದ ಈ ಕ್ಷಣದಲ್ಲಿ ಜನರ ಸಂಭ್ರಮ ಸಡಗರ ಮುಗಿಲು ಮುಟ್ಟಿತ್ತು.
 
•  ವಿಂಬಲ್ಡನ್ ಪಟ್ಟದ ರೋಚಕ ನಿರೀಕ್ಷೆಯಲ್ಲಿ ಪ್ರೇಕ್ಷಕ 
ಲಂಡನ್, ಜು.5: ಟೆನ್ನಿಸ್ ಲೋಕದ ಇಬ್ಬರ ಸ್ಟಾರ್ ಆಟಗಾರರಾದ ಸ್ವಿಜರ್‌ಲೆಂಡಿನ ರೋಜರ್ ಫೆಡರರ್ ಹಾಗೂ ಸ್ಪೇನಿನ ರಾಫೆಲ್ ನಡಾಲ್ ನಡುವೆ ಜು.6 ಭಾನುವಾರದಂದು ವಿಂಬಲ್ಡನ್ ಪ್ರಶಸ್ತಿಗೆ ಅಂತಿಮ ಹಣಾಹಣಿ ನಡೆಯಲಿದೆ. ವಿಶ್ವ ನಂಬರ್ ಒನ್ ಪಟ್ಟಕ್ಕೆ ಹಸಿರುಹುಲ್ಲು ಹಾಸಿನ ಮೈದಾನ ಸಜ್ಜಾಗಿದೆ. ಈ ಇಬ್ಬರು ಮದಗಜಗಳ ಹೋರಾಟ ಪ್ರೇಕ್ಷಕರಿಗೆ ರಸದೌತಣ ನೀಡಲಿದೆ.
 
•  ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಏಕಾಂಗಿ ಹೋರಾಟ 
ನವದೆಹಲಿ, ಜು. 5 : ನಾಗರಿಕ ಪರಮಾಣು ಒಪ್ಪಂದ ಕಗ್ಗಂಟಾಗಿರುವ ಹಿನ್ನಲೆಯಲ್ಲಿ ಯುಪಿಎ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ಮುಂದಾಗಿರುವ ಸಮಾಜವಾದಿ ಪಕ್ಷದ ಜತೆಗೆ ಉತ್ತರ ಪ್ರದೇಶದಲ್ಲೂ ಕೂಡಾ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ನಿರಾಕರಿಸಿದ್ದಾರೆ.
 
•  ಜು.17ರ ರಾಜ್ಯ ಬಜೆಟ್‌ನಲ್ಲಿ ರೈತರಿಗೆ ಆದ್ಯತೆ: ಬಿಎಸ್‌ವೈ 
ಧಾರವಾಡ, ಜು. 5 : ರೈತ ಹಿತದೃಷ್ಟಿಯಿಂದ ಶೀಘ್ರದಲ್ಲಿ ಕೃಷಿ ಆಯೋಗ ರಚಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಲ್ಲಿ ಪ್ರಕಟಿಸಿದರು.
 
•  ಶೀಘ್ರದಲ್ಲಿ ಒಂಬತ್ತು ಸಾವಿರ ಶಿಕ್ಷಕರ ನೇಮಕ 
ಬೆಂಗಳೂರು, ಜು. 4 : ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ  ಪಂಗಡ ಹಾಗೂ ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿದ್ದು ವಿಧ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಸಲುವಾಗಿ ಸುಮಾರು 9 ಸಾವಿರ ಶಿಕ್ಷಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಿ. ಸುಧಾಕರ್ ಹೇಳಿದರು.
 
•  ಕವಯಿತ್ರಿ ಲತಾ ರಾಜಶೇಖರ್ ಅವರ 'ಯೇಸು ಮಹಾದರ್ಶನ' 
ಹೊಸಗನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾವ್ಯ ಕೃಷಿ ಮಾಡುತ್ತಿರುವ ಕವಯಿತ್ರಿ ಮೈಸೂರಿನ ಡಾ| ಲತಾ ರಾಜಶೇಖರ್ ಅವರ ಎರಡನೇ ಮಹಾಕಾವ್ಯ 'ಯೇಸು ಮಹಾದರ್ಶನ' ಇತ್ತೀಚೆಗೆ ಲೋಕಾರ್ಪಣೆಗೊಂಡಿತು. ಲತಾ ಅವರು 'ಬುದ್ಧ ಮಹಾದರ್ಶನ' ಎಂಬ ಮಹಾಕಾವ್ಯವನ್ನೂ ರಚಿಸಿದ್ದಾರೆ. ಈ ಮಹಾಕಾವ್ಯದ ಕುರಿತು ಹರಿಹರೇಶ್ವರ ಅವರಿಂದ ಪರಿಚಯ ಮತ್ತು ವಿಮರ್ಶಾ ಲೇಖನ.
 
•  ಸಂಚಾರಿ ಪೀಠಕ್ಕೆ ಚಾಲನೆ; ಜು.7ರಿಂದ ಕಾರ್ಯಾರಂಭ 
ಹುಬ್ಬಳ್ಳಿ, ಜು. 4 : ಉತ್ತರ ಕರ್ನಾಟಕ ಜನತೆಯ ಐದು ದಶಕಗಳ ನಿರಂತರ ಹೋರಾಟಕ್ಕೆ ಶುಕ್ರವಾರ ಫಲ ದೊರೆತಿದೆ. ಸುಪ್ರಿಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಾ. ಕೆ.ಜಿ.ಬಾಲಕೃಷ್ಣನ್ ಅಧಿಕೃತವಾಗಿ ಹೈಕೋರ್ಟ್ ಸಂಚಾರಿ ಪೀಠಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಜು .7 ರಿಂದ ಹೈಕೋರ್ಟ್ ಸಂಚಾರಿ ಪೀಠ ಕಾರ್ಯಾರಂಭ ಮಾಡುವ ಮೂಲಕ ಈ ಭಾಗದ ಜನರ ಬಹುದಿನಗಳ ಮಹತ್ವದ ಕನಸೊಂದು ಈಡೇರಿದಂತಾಗಿದೆ.
 
•  ಗೂಂಡಾ ಕಾಯ್ದೆ ಜಾರಿಗೆ ಜಯಮಾಲಾ ಆಗ್ರಹ 
ಬೆಂಗಳೂರು, ಜು.4: ನಕಲಿ ಸಿಡಿ ಹಾವಳಿಯನ್ನು ತಡೆಗಟ್ಟಿ  ಗೂಂಡಾ ಕಾಯಿದೆ ಜಾರಿಗೊಳಿಸಲು ಹಾಗೂ ಕನ್ನಡ ಚಿತ್ರೋದ್ಯಮಕ್ಕಾಗಿ  ದುಡಿದ ಅಶಕ್ತರಿಗೆ ನಿವೇಶನ ಒದಗಿಸಬೇಕೆಂದು ಚಲನಚಿತ್ರ ವಾಣಿಜ್ಯ ಮಂಡಲಿಯ ಅಧ್ಯಕ್ಷೆ ಜಯಮಾಲಾ  ಶುಕ್ರವಾರ ಆಗ್ರಹಿಸಿದ್ದಾರೆ. 
 
•  ದಟ್ಸ್ ಕನ್ನಡ ಪಾಕಶಾಲೆ: ಟೊಮ್ಯಾಟೋ ಖಾದ್ಯ 
ಕೋಲಾರದಲ್ಲಿ ಟೋಮ್ಯಾಟೋ ಧಾರಣೆ ಕುಸಿದಿದೆ . ಕೆ.ಜಿ. ಟೊಮ್ಯಾಟೋ 30 ಪೈಸೆಗಳಿಗೆ ಬಿಕರಿಯಾಗುತ್ತಿದೆ. ಸೂಕ್ತ ಬೆಂಬಲ ಬೆಲೆಯೂ ಸಿಗದೆ  ರೈತರು ಪರಿತಪಿಸುತ್ತಿದ್ದಾರೆ. ಟೊಮ್ಯಾಟೋ ಬಳಕೆಯನ್ನು ಹೆಚ್ಚು ಮಾಡಿ ನಮ್ಮ ಕೈಲಾದ ಸಹಾಯ ಮಾಡೋಣ. ಇದನ್ನು ಅಳಿಲು ಸೇವೆ ಎಂದು ತಿಳಿದರೂ ಅಡ್ಡಿಯಿಲ್ಲ. ನಿರುಪಮಾ ರಾವ್ ಕಳುಹಿಸಿರುವ ಈ ಟೊಮ್ಯಾಟೋ ಖಾದ್ಯ ನಿಮಗಿಷ್ಟವಾಗಬಹುದು.
 
•  ಬೊಂಬಾಟ್ ಚಿತ್ರ ಧ್ವನಿ ಸುರಳಿ ವಿಮರ್ಶೆ 
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಲಕ್ಕಿ ಸ್ಟಾರ್ ರಮ್ಯಾ ಅಭಿನಯದ ಬೊಂಬಾಟ್ ಚಿತ್ರದ ಧ್ವನಿಸುರಳಿ ಜುಲೈ 2 ರಂದು ಬಿಡುಗಡೆ ಮಾಡಲಾಯಿತು.ಅಂದು ರೇಡಿಯೊ ಮಿರ್ಚಿ ಎಫ್ ಎಂ ವಾಹಿನಿಯಲ್ಲಿ  ಹುಟ್ಟು ಹಬ್ಬದ ಪ್ರಯುಕ್ತ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣೇಶ್  ಧ್ವನಿಸುರಳಿಯನ್ನು  ಅನಾವರಣಗೊಳಿಸಿದರು.ರಾಕ್ ಲೈನ್ ವೆಂಕಟೇಶ್ ಅವರ ಬ್ಯಾನರ್ ನಲ್ಲಿ ತಯಾರಾಗಿರುವ ಈ ಚಿತ್ರವನ್ನು ಡಿ. ರಾಜೇಂದ್ರ ಬಾಬು ನಿರ್ದೇಶಿಸಿದ್ದಾರೆ.
 
•  ಅಣು ಬಿಕ್ಕಟ್ಟಿಗೆ ಎಡ ಪಕ್ಷಗಳ ಅಂತಿಮ ಗಡುವು 
ನವದೆಹಲಿ, ಜು. 4 : ನಾಗರಿಕ ಪರಮಾಣು ಒಪ್ಪಂದ ವಿಷಯದಲ್ಲಿ ಉಂಟಾಗಿರುವ ಬಿಕ್ಕಟ್ಟು ತೀವ್ರಗೊಂಡಿರುವ ಹಿನ್ನಲೆಯಲ್ಲಿ ಶುಕ್ರವಾರ ಎಡಪಕ್ಷಗಳ ನಡೆಸಿದ ನಿರ್ಣಾಯಕ ಸಭೆ ಮುಕ್ತಾಯಗೊಂಡಿದೆ. ಅಣು ಒಪ್ಪಂದ ಕುರಿತು ಪ್ರಧಾನಮಂತ್ರಿ ತಮ್ಮ ಸ್ಪಷ್ಟವಾದ ನಿಲುವನ್ನು ಜು. 7ರೊಳಗಾಗಿ ಘೋಷಿಸಬೇಕು ಎಂದು ಎಡಪಕ್ಷಗಳ ಮುಖಂಡರು ಯುಪಿಎ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ. 
 
•  ಜೋಕ್: ಸಾಫ್ಟ್‌ವೇರ್ ತಜ್ಞರ ಸಿನಿಮಾ ಶೀರ್ಷಿಕೆಗಳು! 
ಸಾಫ್ಟ್‌ವೇರ್ ತಜ್ಞರು ಸಿನಿಮಾ ತೆಗೆದರೆ ಅದರ ಟೈಟಲ್‌ಗಳು ಹೇಗಿರುತ್ತವೆ? ದಟ್ಸ್‌ಕನ್ನಡ ಜೋಕ್ಸ್ ಖಜಾನೆಯಿಂದ ಸಂಗ್ರಹಿಸಿದ ಆಯ್ದ ಕೆಲವು ಶೀರ್ಷಿಕೆಗಳು. ಎಚ್ಚರಿಕೆ ಈ ಶೀರ್ಷಿಕೆಗಳು ಚಲನಚಿತ್ರ ವಾಣಿಜ್ಯ ಮಂಡಲಿಯಲ್ಲಿ ಈಗಾಗಲೇ ನೋಂದಾಯಿಸಲಾಗಿದೆ. 
 
•  ಗಣಿ ಹಗರಣದ ಸಮಗ್ರ ತನಿಖೆ ಎಚ್ ಡಿಕೆ ಆಗ್ರಹ 
ಬೆಂಗಳೂರು, ಜು. 4 : ಗಣಿ ಲಂಚ ಹಗರಣಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿರುವ ಬಿಜೆಪಿ ನ್ಯಾಯಯುತವಾದ ತನಿಖೆ ನಡೆಸಿದರೆ ಅದನ್ನು ಎದುರಿಸಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
 
•  ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗೆ ಸಿಎಂ ಅಭಯ 
ಧಾರವಾಡ, ಜು. 4 : ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಕ್ರಿಯಾ ಯೋಜನೆ ರೂಪಿಸಿ ವಿಶೇಷ ಅನುದಾನ ನೀಡುವ ಮೂಲಕ ಅವಳಿ ನಗರವನ್ನು ಮಹಾನಗರವನ್ನಾಗಿಸುವ ಇಂಗಿತವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ವ್ಯಕ್ತಪಡಿಸಿದರು.
 
•  ಅಣು ಒಪ್ಪಂದ: ಪ್ರಧಾನಿ ಮುಲಾಯಂ ಭೇಟಿ 
ನವದೆಹಲಿ, ಜು.4: ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕರಾದ ಮುಲಾಯಂ ಸಿಂಗ್ ಯಾದವ್ ಹಾಗೂ ಅಮರ್ ಸಿಂಗ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಶುಕ್ರವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಅಣು ಒಪ್ಪಂದಕ್ಕೆ ನಾವು ಯಾವುದೇ ಬೆಂಬಲ ಸೂಚಿಸಿಲ್ಲ. ಒಪ್ಪಂದಕ್ಕೆ ಸಂಬಂಧಿಸಿದ ನಮ್ಮ ಗ್ರಹಿಕೆಯನ್ನು ಪ್ರಧಾನಿ ಅವರೊಂದಿಗೆ ಹಂಚಿಕೊಳ್ಳಲು ಭೇಟಿಯಾಗಿದ್ದಾಗಿ ತಿಳಿಸಿದರು. ಇದೇ ವಿಚಾರವಾಗಿ ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
 
•  ಹರ್ಮನ್ ಬವೇಜಾ ಬಾಲಿವುಡ್ ಗೆ ಎಂಟ್ರಿ 
ಮಿಲನ ಮಿಲೋ ಎಂದು ಸೊಗಸಾಗಿ ಕುಣಿಯುತ್ತ ಪ್ರೇಕ್ಷಕರನ್ನು ಮೋಡಿ ಮಾಡಿದ ಹರ್ಮನ್ ಬವೇಜಾ ಎಂದು ಸ್ಪುರದ್ರೂಪಿ ಬಾಲಿವುಡ್ ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾನೆ. ಚಿತ್ರರಂಗದ ಕರುಳಿನ ಕುಡಿ ಎನ್ನುವ ಕಿರೀಟದ ಮೂಲಕ ದಾಂಗುಡಿ ಇಟ್ಟಿರುವ ಹರ್ಮನ್ 2050 ಲವ್ ಸ್ಟೋರಿ ಚಿತ್ರದ ಹೀರೋ. ತ್ರಿವಳಿ ಖಾನ್ ಗಳ ಅಬ್ಬರದಲ್ಲಿ ಸ್ಥಾನ ಪಡೆಯುವ ಸ್ಪಷ್ಟ ಹೆಜ್ಜೆ ಇರಿಸಿದ್ದಾನೆ.   
 
•  ಮಾಗಡಿಯಲ್ಲಿ `ಬಿರುಗಾಳಿ`ಬಿರುಸಿನ ಶೂಟಿಂಗ್ 
`ಬಿರುಗಾಳಿ`ಗೆ ನಿರ್ದಿಷ್ಟ ನೆಲೆ ಇಲ್ಲ. ಮಾರಿಷಸ್‌ನಲ್ಲು ಬೀಸುತ್ತದೆ ಮಾಗಡಿಯಲ್ಲೂ ಬೀಸುತ್ತದೆ. ತನ್ನಗಿಷ್ಟವಾದ ಕಡೆ ಬೀಸಿ ಭೀಕರ ನಷ್ಟ ಉಂಟು ಮಾಡುವ ಆ ಬಿರುಗಾಳಿ ಅಲ್ಲ. ಇದು ಆದರ್ಶ ಎಂಟರ್ ಪ್ರೈಸಸ್ ಅವರ ಚೊಚ್ಚಲ ಚಿತ್ರ.ನಟ ಚೇತನ್ ಗೆ ಇದು ಆ ದಿನಗಳು ನಂತರದ ಚಿತ್ರ.
 
•  ಜೀ ಕನ್ನಡದಲ್ಲಿ ಯೇಸುದಾಸ್ ಅವರ 'ಗುಣಗಾನ' 
ಬೆಂಗಳೂರು, ಜು.4 : ಜೀ ಕನ್ನಡದ ಜನಮೆಚ್ಚುಗೆಯ ಕಾರ್ಯಕ್ರಮ 'ಗುಣಗಾನ'ದಲ್ಲಿ ಈಗ ಯೇಸುದಾಸ್ ಗೀತೆಗಳ ಗುನುಗು. ಕನ್ನಡ ಚಿತ್ರ ಸಂಗೀತದಲ್ಲಿ ಯೇಸುದಾಸ್ ಅವರದು ಮರೆಯಲಾರದ ಧ್ವನಿ. ಗಂಧರ್ವ ತಾರೆಯರ ನಮನಕ್ಕೆ ಸಜ್ಜಾಗಿರುವ 'ಗುಣಗಾನ'ದಲ್ಲಿ ಈಗ ಯೇಸುದಾಸ್ ಅವರ ಧ್ವನಿಗೆ ಸರಿಸಾಟಿಯಾಗುವವರು ಯಾರು ಎಂಬುದಕ್ಕೆ ಸ್ಫರ್ಧೆ ಪ್ರಾರಂಭವಾಗಿದೆ. ಈ ವಾರದ ಎಲ್ಲ ಹಂತಗಳಲ್ಲೂ ಗೆದ್ದ ಹರ್ಷ ಮತ್ತು ಪ್ರಜ್ವಲ್ ನಡುವೆ ಅಂತಿಮ ಸ್ಫರ್ಧೆ ನಡೆಯಲಿದೆ. ಈ ಸ್ಫರ್ಧೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಎಲ್ಲರ ...
 
•  ವಿಮಾನ ನಿಲ್ದಾಣದಲ್ಲಿ ಅಕ್ರಮ ಹೆರಾಯಿನ್ ವಶ 
ಬೆಂಗಳೂರು, ಜು.4: ಅಕ್ರಮ ಹೆರಾಯಿನ್ ಸಾಗಿಸುತ್ತಿದ್ದ ಇಬ್ಬರು ವಿದೇಶಿಯರನ್ನು ಕಸ್ಟಮ್ಸ್  ಅಧಿಕಾರಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬಂಧಿಸಿದ್ದಾರೆ.
 
•  ಅಕ್ರಮ ಸಕ್ರಮ ಯೋಜನೆಗೆ ನೂತನ ನೀತಿ ಜಾರಿ 
ಬೆಂಗಳೂರು, ಜು. 4 : ಅಕ್ರಮ ಸಕ್ರಮ ಯೋಜನೆ ಹಾಗೂ ಮೌಲ್ಯ ಆಧಾರಿತ ಅಸ್ತಿ ಪದ್ಧತಿ(ಸಿವಿಎಸ್) ಈ ತಿಂಗಳ ಅಂತ್ಯದೊಳಗೆ ಜನ ಸಾಮಾನ್ಯರಿಗೆ ಹೊರೆಯಾಗದಂತೆ ಭಾರಿ ಬದಲಾವಣೆಯೊಂದಿಗೆ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ ಹಾಗೂ ಸಂಪುಟ ಉಪಸಮಿತಿಯ ಅಧ್ಯಕ್ಷರೂ ಆಗಿರುವ ಆರ್. ಅಶೋಕ್ ಹೇಳಿದ್ದಾರೆ.
 
•  ವೇಗ ನಿಯಂತ್ರಕ ಕಾನೂನು ಅವೈಜ್ಞಾನಿಕ : ಅಶೋಕ್ 
ಬೆಂಗಳೂರು, ಜು. 3 : ಸರಕು ಸಾಗಣೆ ವಾಹನಗಳಿಗೆ ವೇಗ ನಿಯಂತ್ರಕವನ್ನು ಅಳವಡಿಸುವುದರಿಂದ ಯಾವುದೇ ಪ್ರಯೋಜನವಿಲ್ಲ, ಅದೊಂದು ಅವೈಜ್ಞಾನಿಕ ಕ್ರಮ. ಅದರ ಬದಲು ಸಾರಿಗೆ ಕಾನೂನನ್ನೇ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಸಾರಿಗೆ ಸಚಿವ ಆರ್. ಅಶೋಕ್ ಹೇಳಿದ್ದಾರೆ.
 
•  ಭಾರತ್ ಬಂದ್‌ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ 
ಬೆಂಗಳೂರು, ಜು. 3 : ಅಮರನಾಥ ದೇವಾಲಯಕ್ಕೆ ನೀಡಲಾಗಿದ್ದ ಸರ್ಕಾರಿ ಭೂಮಿಯನ್ನು ವಾಪಸ್ಸು ಪಡೆದಿರುವ ಜಮ್ಮು ಕಾಶ್ಮೀರ ಸರ್ಕಾರದ ಕ್ರಮವನ್ನು ವಿರೋಧಿಸಿ ಹಿಂದುಪರ ಸಂಘಟನೆಗಳು ನೀಡಿದ್ದ ಭಾರತ ಬಂದ್ ಕರೆಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
 
•  ರಾಜ್ಯದಲ್ಲಿ ಮತ್ತಷ್ಟು ನೂತನ ವಿಮಾನ ನಿಲ್ದಾಣಗಳು 
ನವದೆಹಲಿ, ಜು.3: ಕರ್ನಾಟಕದಲ್ಲಿ ನೂತನ ವಿಮಾನ ನಿಲ್ದಾಣಗಳು ಸ್ಥಾಪನೆಯಾಗಲಿದ್ದು ಮುಂಬರುವ ಎರಡು ವರ್ಷಗಳಲ್ಲಿ  ವಿಮಾನಯಾನಕ್ಕೆ ಉತ್ತಮ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಗುರುವಾರ ತಿಳಿಸಿದರು.
 
•  ಬೆಳಿಗ್ಗೆ ಮೂಡು ಕೆಡದಿದ್ದರೆ, ಕೆಡಿಸದಿದ್ದರೆ ನೀವು ಸಂಪಾದಕರಲ್ಲ! 
ಕಳೆದ ವರ್ಷ ಸ್ನೇಹಿತ ಅಬ್ದುಲ್ ರಷೀದ್ ಮೈಸೂರು ಆಕಾಶವಾಣಿ ಕಾರ್ಯಕ್ರಮವೊಂದಕ್ಕೆ ಸಂದರ್ಶಿಸುವಾಗ `ಬೆಳಗ್ಗೆ ಬೆಳಗ್ಗೆ ಸಂಪಾದಕರಿಗೆ ಮೂಡ್ ಯಾಕೆ ಔಟ್ ಆಗುತ್ತದೆ?' ಎಂದು ಕೇಳಿದ್ದರು. ಅದಕ್ಕೆ ನಾನು ಹೇಳಿದ್ದೆ- ಬೆಳಗ್ಗೆ ಬೆಳಗ್ಗೆ ಮೂಡ್‌ಔಟ್ ಮಾಡಿಕೊಳ್ಳದಿದ್ದರೆ ಹಾಗೂ ಬೇರೆಯವರ ಮೂಡ್ ಔಟ್ ಮಾಡದಿದ್ದರೆ ಅವರು ಸಂಪಾದಕರೆಂದು ಕರೆಸಿಕೊಳ್ಳುವುದಿಲ್ಲ. ಈ ಎರಡೂ ಕೆಲಸವನ್ನು ಏಕಕಾಲಕ್ಕೆ ಮಾಡುತ್ತಾ, ಸದಾ ನಗುನಗುತ್ತಿರುವವನೇ ಉತ್ತಮ ಸಂಪಾದಕ.' ಪೋಲೆಂಡಿನ ಪತ್ರಕರ್ತ ರಿಯಾಸರ್ಡ್ ಕಪುಸಿನ್‌ಸ್ಕಿ ಅನಿಸಿಕೆಯೂ ಹೆಚ್ಚು ಕಮ್ಮಿ ಇದೇ ಧಾಟಿಯಲ್ಲಿರುವುದನ್ನು ...
 
•  ಏಷ್ಯಕಪ್-2008 ಕ್ರಿಕೆಟ್ ಸಮರದ ವೇಳಾಪಟ್ಟಿ 
ಕರಾಚಿ, ಜೂ.24: ಮತ್ತೊಂದು ಕ್ರಿಕೆಟ್ ಸಮರ ಏಷ್ಯಕಪ್-2008 ಇಂದಿನಿಂದ (ಜೂ.24) ಆರಂಭವಾಗಿದೆ. ಏಷ್ಯಾದ ಮೂರು ಬಲಿಷ್ಠ ರಾಷ್ಟ್ರಗಳೊಂದಿಗೆ ಇನ್ನುಳಿದ ಮೂರು ತಂಡಗಳು ಪ್ರತಿಷ್ಠಿತ ಏಷ್ಯಕಪ್‌ಗಾಗಿ ಸೆಣೆಸಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಭಾರಿ ಪೈಪೋಟಿ ನಡೆಸಲು ಸಿದ್ಧವಾಗಿದ್ದರೆ, ಇನ್ನುಳಿದ ತಂಡಗಳಾದ ಯುಎಇ, ಬಾಂಗ್ಲಾ ಹಾಗೂ ಹಾಂಕಾಂಗ್ ದೊಡ್ಡ ತಂಡಗಳೊಂದಿಗೆ ಅಭ್ಯಾಸ, ಅನುಭವ ಪಡೆಯಲು ಟೂರ್ನಿಯನ್ನು ಬಳಸಿಕೊಳ್ಳಲಿವೆ. ಇದೆಲ್ಲದರ ನಡುವೆ ಬಾಂಗ್ಲಾ ಅಚ್ಚರಿಯ ಫಲಿತಾಂಶ ನೀಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಗ್ರೂಪ್ 'ಎ'ನಲ್ಲಿ ಬಾಂಗ್ಲಾ, ಯುಎಇ ...
 
•  ಕಡ್ಡಾಯ ಕನ್ನಡಕ್ಕೆ ಸರ್ಕಾರದ ನಿಲುವು ಅಚಲ: ಬಿಎಸ್ ವೈ 
ನವದೆಹಲಿ, ಜು. 3 : ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಕುರಿತ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ವಿಷಯಕ್ಕೆ ಸಂಬಂಧಿದಂತೆ ಜು. 6 ರಂದು ಸಾಹಿತಿಗಳು ಹಾಗೂ ಕನ್ನಡಪರ ಸಂಘಟನೆಗಳೊಂದಿಗೆ ಕೂಲಂಕಷ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸ್ಪಷ್ಟಪಡಿಸಿದ್ದಾರೆ.
 
•  ನಾಲ್ಕು ನಟರೊಂದಿಗೆ 'ಮಸ್ತ್ ಮಜಾ ಮಾಡಿ'! 
ನಟರಾದ ಸುದೀಪ್, ವಿಜಯ್ ರಾಘವೇಂದ್ರ, ದಿಗಂತ್ ಹಾಗೂ ನಾಗ ಕಿರಣ್  ಒಟ್ಟಿಗೆ ನಟಿಸುತ್ತಿರುವ 'ಮಸ್ತ್ ಮಜಾ ಮಾಡಿ'!'ಚಿತ್ರವನ್ನು ಕನ್ನಡ ಚಿತ್ರೋದ್ಯಮದ ಪ್ರಸಿದ್ಧ ನಿರ್ಮಾಪಕಿ ಸೌಂದರ್ಯ ಜಗದೀಶ್  ನಿರ್ಮಿಸುತ್ತಿದ್ದಾರೆ. ಶಿವರಾಜ್ ಕುಮಾರ್ ನಟನೆಯ  'ನಂದ' ಚಿತ್ರದ ನಿರ್ದೇಶಕ ಅನಂತನಾಗ್  ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
 
•  ಸಿಡಿಯಲ್ಲಿ ಶ್ರೀಮದ್ಭಗವದ್ಗೀತಾ ತತ್ತ್ವಗಾನ ರಸಾಯನ 
ಬೆಂಗಳೂರು, ಜು. 3 : ಕರ್ನಾಟಕ ಶಂಕರರೆಂದೇ ಪ್ರಖ್ಯಾತರಾದ ಹೊಳೆನರಸೀಪುರದ ಸಚ್ಚಿದಾನಂದೇಂದ್ರ ಸರಸ್ವತೀಸ್ವಾಮಿಗಳು ಮೊಟ್ಟ ಮೊದಲಿಗೆ ಆದಿ ಶಂಕರಾಚಾರ್ಯರ ಪ್ರಸ್ಥಾನತ್ರಯ ಸಂಸ್ಕೃತ ಭಾಷ್ಯವನ್ನು ಸಿರಿ ಕನ್ನಡಭಾಷೆಗೆ ಭಾಷಾಂತರಿಸಿದ್ದಾರೆ. ಸಿಡಿ ರೂಪದಲ್ಲಿರುವ ಈ ಕೃತಿಯನ್ನು ವೇದಾಂತ ಚಿಂತನ ಸತ್ಸಂಗದವರು ಜುಲೈ 13ರಂದು ಬಿಡುಗಡೆ ಮಾಡಲಿದ್ದಾರೆ.
 
•  `ಅರ್ಜುನ` ದರ್ಶನ್ ಚಿತ್ರ ಬ್ಯಾಂಕಾಕ್ ನಲ್ಲಿ ಶೂಟಿಂಗ್ 
ರಾಜ್ಯದ ಐದು ಕೋಟಿ ಜನರಲ್ಲಿ ಇವನೊಬ್ಬನೆ `ಅರ್ಜುನ`. ಇದು ಸುಳ್ಳಲ್ಲ. ದರ್ಶನ್ ಅಭಿನಯದ `ಅರ್ಜುನ` ಚಿತ್ರಕ್ಕೆ ಕವಿರಾಜ್ ಅವರು ಬರೆದಿರುವ ಗೀತೆಯಲ್ಲಿ ಬರುವ ಸಾಲು. ಬ್ಯಾಂಕಾಕ್ ನಲ್ಲಿ ಮೀರಾಚೋಪ್ರಾ ಜತೆ ದರ್ಶನ್ ಅಮೋಘವಾಗಿ ನರ್ತಿಸಿದ್ದನ್ನು ನಿರ್ದೇಶಕ ಶಾಹುರಾಜ್ ಶಿಂಧೆ ಚಿತ್ರೀಕರಿಸಿಕೊಂಡರು.
 
•  ದೇಶವ್ಯಾಪಿ ಬಂದ್‌ಗೆ ರಾಜ್ಯದಲ್ಲಿ ಪಾಕ್ಷಿಕ ಬೆಂಬಲ 
ಬೆಂಗಳೂರು, ಜು.3: ದೇಶದಾದ್ಯಂತ ಗುರುವಾರ  ಬಂದ್‌ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಅಹಿತಕರ ಘಟನೆ ನಡೆಯದೆ ಪಾಕ್ಷಿಕ ಬೆಂಬಲ  ವ್ಯಕ್ತವಾಗಿದೆ. ಕೆಲವು ಕಡೆ  ಅಂಗಡಿ ಮುಂಗಟ್ಟುಗಳನ್ನು  ಮುಚ್ಚಲಾಗಿತ್ತು. ಸಾರಿಗೆ ಸಂಸ್ಥೆಯ ಬಸ್ಸುಗಳು ರಸ್ತೆಗೆ ಇಳಿಯದ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸಿದರು. ಆದರೆ ಬೆಂಗಳೂರಿನಲ್ಲಿ ಮಾತ್ರ ಬಂದ್‌ಗೆ ಅಷ್ಟಾಗಿ ಪ್ರತಿಕ್ರಿಯೆ ಕಂಡುಬಂದಿಲ್ಲ. ಸರ್ಕಾರಿ ಕಚೇರಿಗಳು ಹಾಗೂ  ಸಾರಿಗೆ ವ್ಯವಸ್ಥೆ ಸಹ ಎಂದಿನಂತೆ ಕಾರ್ಯನಿರ್ವಹಿಸಿದವು.  
 
•  ಬಿಬಿಎಂಪಿ ಚುನಾವಣೆಗೆ ಹೈಕೋರ್ಟ್ ಆದೇಶ 
ಬೆಂಗಳೂರು, ಜು. 2 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಇನ್ನು ಮೂರು ತಿಂಗಳದೊಳಗೆ ಚುನಾವಣೆ ನಡೆಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಹೈಕೋರ್ಟ್ ಚುನಾವಣೆ ಆಯೋಗ ಹಾಗೂ  ಸರ್ಕಾರಕ್ಕೆ ಸೂಚನೆ ನೀಡಿದೆ.
 
•  ಅನುದಾನ ರಹಿತ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಇಲ್ಲ 
ಬೆಂಗಳೂರು, ಜು. 2 : ಅನುದಾನ ರಹಿತ ಶಾಲೆಗಳಲ್ಲಿ ಕನ್ನಡ ಕಡ್ಡಾಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಭಾಷಾ ನೀತಿಗೆ ಸಂಬಂಧಿಸಿಂತೆ ಸುಮಾರು 14 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ ಖಾಸಗಿ ಶಾಲಾ ಮಂಡಳಿಗಳಿಗೆ ಜಯ ಸಿಕ್ಕಿದ್ದು, ಇದರಲ್ಲಿ ಸರ್ಕಾರಕ್ಕೆ ಹಿನ್ನಡೆ ಅನುಭವಿಸುವಂತಾಗಿದೆ.
 
•  ಗೋಲ್ಡನ್ ಸ್ಟಾರ್‌ಗೆ ಹುಟ್ಟುಹಬ್ಬದ ಸಂಭ್ರಮ 
ಒಂದಾದ ನಂತರ ಒಂದು ಯಶಸ್ವಿ ಚಿತ್ರಗಳನ್ನು ಕೊಡುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಇಂದು (ಜು.2) ಹುಟ್ಟು ಹಬ್ಬದ ಸಂಭ್ರಮ. ತಮ್ಮ ಹುಟ್ಟುಹಬ್ಬವನ್ನು ಶೇಷಾದ್ರಿಪುರಂನ ಕರ್ನಾಟಕ ಕ್ಷೇಮಾಭ್ಯುದಯ ಸಂಘದ ಅಂಧ ಮಕ್ಕಳೊಂದಿಗೆ ಇಂದು ಅವರು ಸರಳವಾಗಿ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ಅಂಧ ಮಕ್ಕಳಿಗಾಗಿ ಕಂಪ್ಯೂಟರ್ ಲ್ಯಾಬನ್ನು ಸಹ ಉದ್ಘಾಟಿಸಿ ಅವರೊಂದಿಗೆ ಮಧ್ಯಾಹ್ನದ ಭೋಜನ ಸವಿದರು.
 
•  ಚನ್ನೆಕಲ್, ಚಂಡೆಮನೆ ಎಂಬ ಮಳೆಗಾಲದ ಜಲಪಾತ 
ಆಗಸದಲಿ ಆಷಾಢದ ಕಾರ್ಮೋಡಗಳ ಕವಿಯುತ್ತಿದ್ದಂತೆ ಮಲೆನಾಡುಗಳಲ್ಲಿ ಜಲಪಾತಗಳ ಧುಮ್ಮಿಕ್ಕುವಿಕೆಗೆ ಏನೋ ಆವೇಗ. ಕಣ್ಮನ ತಣಿಸಿಕೊಳ್ಳಲು ಜೋಗಕ್ಕೆ ಧಾವಿಸುವ ಜನರಿಗೆ ಪಕ್ಕದಲ್ಲೇ ಇರುವ ಇನ್ನೆರಡು ಮೋಹಕ ಜಲಧಾರೆಗಳ ಬಗ್ಗೆ ಗೊತ್ತೇ ಇರುವುದಿಲ್ಲ. ಜೋಗದಲ್ಲಿ ಮನಕ್ಕೆ ಆನಂದ ಸಿಕ್ಕರೆ, ಚಂಡೆಮನೆ ಮತ್ತು ಚನ್ನೆಕಲ್ ಜಲಪಾತದಲ್ಲಿ ದೇಹಕ್ಕೂ ಭರ್ಜರಿ ನೈಸರ್ಗಿಕ ಮಸಾಜ್.
 
•  'ಪಕ್ಷೇತರರ ಎತ್ತಂಗಡಿ ಕಾಂಗ್ರೆಸ್ ಶಾಸಕರಿಗೆ ಮಣೆ' 
ಮೈಸೂರು, ಜು. 2 : ಕಾಂಗ್ರೆಸ್ ನ ಕೆಲ ಶಾಸಕರು ಶೀಘ್ರದಲ್ಲಿ ಬಿಜೆಪಿ ಸೇರಲಿದ್ದು. ಪಕ್ಷೇತರ ಸಚಿವರನ್ನು ಬಿಜೆಪಿ ಸಂಪುಟದಿಂದ ಎತ್ತಂಗಡಿ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಭವಿಷ್ಯ ನುಡಿದಿದ್ದಾರೆ.
 
•  ಕೇಂದ್ರದ ಭರವಸೆಗೆ ಯಡಿಯೂರಪ್ಪ ಖುಶ್ 
ಬೆಂಗಳೂರು, ಜು. 2 : ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರ ಹಾಗೂ ಪಟ್ಟಣಗಳ ಸಮಗ್ರ ಅಭಿವೃದ್ಧಿಯ ಹಿನ್ನಲೆಯಲ್ಲಿ 8800 ಕೋಟಿ ರುಪಾಯಿಗಳ ಅನುದಾನವನ್ನು ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿದ ಮನವಿಗೆ ಕೇಂದ್ರದ ನಗರಾಭಿವೃದ್ಧಿ ಸಚಿವ ಜೈಪಾಲ್ ರೆಡ್ಡಿ ಅವರು ಸಹಮತ ವ್ಯಕ್ತಪಡಿಸಿದ್ದಾರೆ.
 
•  ಮುಖ್ಯಮಂತ್ರಿಗಳಿಂದ ವಿಟ್ಲಾ ಇಮೇಜಸ್ ಅನಾವರಣ 
ಬೆಂಗಳೂರು, ಜು. 2:ಆನ್ ಲೈನ್ ನಲ್ಲಿ ಫೋಟೊ ಏಜೆನ್ಸಿ ರೂಪದಲ್ಲಿ ವೈವಿಧ್ಯಮಯ ಚಿತ್ರಗಳ ಖಜಾನೆ ಇರುವುದೇ ಬಹುಶಃ ವಿಟ್ಲಾ ಇಮೇಜಸ್ ನಲ್ಲಿ ಮಾತ್ರ. ಏಕ್ಸ್ ಪ್ರೆಸ್ ಪಬ್ಲಿಕೇಷನ್ ನಲ್ಲಿ ಛಾಯಾಗ್ರಾಹಕರಾಗಿ ಹೆಸರುವಾಸಿಯಾಗಿರುವ ಕೇಶವ ವಿಟ್ಲಾ ಅವರ ಚಿತ್ರಗಳ ಆಗರವುಳ್ಳ ವೆಬ್ ಸೈಟ್ ವಿಟ್ಲಾ ಇಮೇಜಸ್ ನಾಡಿನ ಜನತೆಗೆ  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅರ್ಪಿಸಿದರು.
 
•  ಮಡಿಕೇರಿ ಮೇಲೆ ಕವಿದ ಭೂಕಬಳಿಕೆಯ ಮಂಜು 
ಖಾಸಗಿ ಒಡೆತನದಲ್ಲಿರುವ ಕೊಡಗಿನ ನೈಸರ್ಗಿಕ ಅರಣ್ಯ ಇಂದು ಕೆಲ ಸ್ವಾರ್ಥಿಗಳ ಹುನ್ನಾರದಿಂದಾಗಿ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ. ಸರ್ಕಾರಕ್ಕೆ ಸೇರಿದ ಅರಣ್ಯ ಪ್ರದೇಶವೇ ಖಾಸಗಿ ರೆಸಾರ್ಟ್, ಅಪಾರ್ಟ್‌ಮೆಂಟು, ವಿಲ್ಲಾಗಳಾಗಿ ಪರಿವರ್ತಿತವಾಗುತ್ತಿವೆ. ಕೆಲ ಧನದಾಹಿಗಳು, ಈ ಪ್ರದೇಶಗಳನ್ನು ಪರಕೀಯರಿಗೂ ಮಾರಾಟ ಮಾಡಲು ಸಿದ್ಧರಾಗಿದ್ದಾರೆ. ವಿಪರ್ಯಾಸವೆಂದರೆ, ಇದಕ್ಕೆ ರಾಜ್ಯ ಸರ್ಕಾರದ ಕುಮ್ಮಕ್ಕೂ ಇದೆ. ಕೊಡವರ ರಾಜ್ಯದಲ್ಲಿ ಕಾಡುಪ್ರದೇಶವನ್ನೇ ಮೇಯುತ್ತಿರುವ ಹಂದಿಗಳಿಗೆ ಬಲೆ ಬೀಸುವವರಿಲ್ಲವೇನು?
 
•  ಬಿಎಸ್‌ವೈ ನೇತೃತ್ವದ ನಿಯೋಗ ಪ್ರಧಾನಿ ಬಳಿಗೆ 
ನವದೆಹಲಿ, ಜು. 2 : ನಾಡಿನ ನೆಲ, ಜಲ, ರೈತರ ವಿಷಯದಲ್ಲಿ ರಾಜಕೀಯ ಬೇಡ, ರಾಜ್ಯದ ಹಿತದೃಷ್ಟಿಯ ಸಲುವಾಗಿ ಎಲ್ಲರೂ ಒಟ್ಟಾಗಿ ಶ್ರಮಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನ್ಯ ಪಕ್ಷದ ಮುಖಂಡರಿಗೆ ಮನವಿ ಮಾಡಿಕೊಂಡಿದ್ದಾರೆ.
 
•  ಕನ್ನಡ ಚಲನಚಿತ್ರ ಹಂಚಿಕೆಗೊಂದು ಹೊಸ ಆಯಾಮ 
ಕನ್ನಡ ಚಿತ್ರರಂಗದ ವರಾಂಡದೊಳಗಿಂದ ಇನ್ನೊಂದು ಒಳ್ಳೇ ಸುದ್ದಿ ಬಂದಿದೆ. ಚಿತ್ರಲೋಕದ ಕೆ.ಎಂ.ವೀರೇಶ್ ಅವ್ರು ಕನ್ನಡ ಚಿತ್ರಗಳಿಗೆ ವಿದೇಶದಲ್ಲಿ ಹಂಚಿಕೆದಾರರಾಗೋಕೆ ಹೊರಟಿದಾರೆ ಅನ್ನೋದೆ ಆ ಸುದ್ದಿ. ಈ ಸಾಹಸಕ್ಕೆ ಮುಂದಾಗಿರೋ ವೀರೇಶ್ ಅವರಿಗೆ ಒಳ್ಳೇದಾಗ್ಲಿ ಅಂತ ಬೆನ್ನು ತಟ್ತಾನೇ ಅವ್ರ ಈ ಸಾಹಸಾನ ಮೆಚ್ಕೊಬೇಕು ಗುರು.
 
•  ಚೂರು ಪಾರು: ಪತ್ರಕರ್ತರ ಮೇಲೆ ಹಲ್ಲೆಗೆ ಖಂಡನೆ 
ಚಿತ್ರದುರ್ಗ, ಜು.2: ಜಿಲ್ಲೆಯ ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಪತ್ರಕರ್ತರು ಶಾಂತಿಯುತವಾಗಿ ಮಂಗಳವಾರ ಧರಣಿ ಮಾಡಿದರು. ನಾಲ್ಕು ದಿನಗಳ ಹಿಂದೆ ವಿಜಯ ಕರ್ನಾಟಕದ ಶಿವಪ್ರಸಾದ್, ಸಂಯುಕ್ತ ಕರ್ನಾಟಕದ ಎಂ.ಎಸ್.ಕರಿಬಸಪ್ಪ ಹಾಗೂ ಪ್ರಜಾವಾಣಿಯ ರೆಹಮತ್ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಹಲ್ಲೆಗೆ ಒಳಗಾಗಿರುವ ಪತ್ರಕರ್ತರು ಭರಮಸಾಗರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಸಂಬಂಧಿಸಿದಂತೆ ಲೇಖನಗಳನ್ನು ಬರೆದಿದ್ದರು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಕೆಲವರು ...
 
•  ಬಾಲಿವುಡ್ ಗಾಯಕರ ವಿರುದ್ಧ ಬಂಡಾಯ! 
ಕೊನೆಗೂ ಗಾಯಕ ಗಾಯಕಿಯರು ಬೀದಿಗೆ ಬಂದಿದ್ದಾರೆ. ಅದರರ್ಥಬೇರೇನೊ ಅಲ್ಲ. ಕನ್ನಡದ ಗಾಯಕರು ಬಾಲಿವುಡ್ ಗಾಯಕರ ವಿರುದ್ಧ ಹೋರಾಡಲು ರಣ ಕಹಳೆ ಊದಿದ್ದಾರೆ. ಬಾಲಿವುಡ್‌ನ ಅನೇಕ ಗಾಯಕರು ಕನ್ನಡದಹಾಡುಗಳಿಗೆ ಧ್ವನಿಯಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಅವರದೇ ಕಾರುಬಾರು. ಸೋನು ನಿಗಮ್, ಉದಿತ್ ನಾರಾಯಣ್, ಕುನಾಲ್ ಗಾಂಜಾವಾಲಾ... ಪಟ್ಟಿ ಬೆಳೆಯುತ್ತದೆ.
 




 Back to Top of Page 





Credit Cards Offers Compare and Apply!
Find Lowest Price Compare and Save!
Shopping
  
Daily Cartoon from CartoonStock.com
Daily funny cartoon from CartoonStock
© original artist c/o CartoonStock.com - unauthorised reproduction is illegal
Like this cartoon ?
License this cartoon for print use, web use or presentation use.
Buy this cartoon on a mug, mousemat or t-shirt.
Buy this cartoon as a print or original artwork.


 Back to Top of Page 



   
  
 
Resources
 Indian Festivals
 INDUSmall
 TajOnline

Popular Televisions
Lowest Prices
Samsung LN52A650 52" LCD TV$1999.99
Samsung LN-46A650 46" LCD TV$1635.00
Panasonic TH-50PZ800U 50" Plasma TV$2139.00
Sharp AQUOS LC52D64U 52" LCD TV$1419.00
Samsung LN52A550 52" LCD TV$1709.99

Popular Digital Cameras
Lowest Prices
Canon EOS 40D SLR Digital Camera Body Only$849.00
Canon EOS Rebel XSi Black Digital Camera Kit$770.00
Nikon D60 SLR Digital Camera Kit$593.01
Nikon D300 Black SLR Digital Camera Body Only$1519.99
Canon EOS 40D SLR Digital Camera Kit$1089.00

Popular Camcorders
Lowest Prices
Sony Handycam HDR-SR11 60GB Hard Drive Camcorder$849.00
Canon VIXIA HF10 16GB Camcorder$749.00
Canon VIXIA HF100 SDHC Flash Memory Camcorder$617.76
Sony Handycam HDR-SR12 120GB Camcorder$1049.00
Canon VIXIA HV30 Mini DV Camcorder$679.00

Popular Notebooks
Lowest Prices
Asus Eee PC 900 20G Notebook - White$529.99
Apple 15" MacBook Pro Notebook$1699.00
HP (Hewlett-Packard) 2133 Mini-Note Notebook$699.99
Apple 13.3" MacBook Notebook$1185.73
Apple 13.3" MacBook Air Notebook$1549.00

Popular Desktops
Lowest Prices
HP (Hewlett-Packard) TouchSmart IQ504 Desktop$1249.99
Apple iMac Intel Core 2 Duo 24" Desktop$1703.90
Acer Aspire M5100 AM5100-EF9500A Desktop$543.83
Apple iMac 2.4GHz Intel Core 2 Duo 20" Desktop$1099.00
HP (Hewlett-Packard) Pavilion a6400f Desktop$509.99